ದರ್ಶನ್ ಗಧಾಯುದ್ದಕ್ಕೆ ಸಜ್ಜು! ಕುರುಕ್ಷೇತ್ರ ದರ್ಶನ ಫೆಬ್ರವರಿಯಲ್ಲಿ | Filmibeat Kannada

2017-11-21 525

Darshan starrer Kannada Movie 'Kurukshetra' to release in February. Cinema has reached final stage & team is ready for Gadayuddha Shooting.


'ಗದಾಯುದ್ದಕ್ಕೆ' ದರ್ಶನ್ ಸಜ್ಜು: ಫೆಬ್ರವರಿಯಲ್ಲಿ 'ಕುರುಕ್ಷೇತ್ರ' ದರ್ಶನ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐವತ್ತನೇ ಸಿನಿಮಾ 'ಕುರುಕ್ಷೇತ್ರ' ಇದೀಗ ಪ್ರಮುಖ ಘಟ್ಟ ತಲುಪಿದೆ. 'ಕುರುಕ್ಷೇತ್ರ' ಟೀಸರ್ ನೋಡಿ ಇಂಪ್ರೆಸ್ ಆಗಿದ್ದ ಅಭಿಮಾನಿಗಳ ಈಗ ಒಂದು ಸಿಹಿ ಸುದ್ದಿ ಲಭಿಸಿದೆ. 'ಕುರುಕ್ಷೇತ್ರ' ಚಿತ್ರದಲ್ಲಿ ಮುಖ್ಯಘಟ್ಟವಾದ 'ಗದಾಯುದ್ಧ'ದ ಚಿತ್ರೀಕರಣಕ್ಕೆ ಸಿನಿಮಾತಂಡ ಸಜ್ಜಾಗಿದ್ದು, ಇದೇ ತಿಂಗಳ (ನವೆಂಬರ್ )24 ರಂದು ರಾಮೋಜಿ ಫಿಲ್ಮಂ ಸಿಟಿಯಲ್ಲಿ ಶೂಟಿಂಗ್ ನಡೆಯಲಿದೆ.'ಕುರುಕ್ಷೇತ್ರ' ಸಿನಿಮಾದಲ್ಲಿನ ಅತೀ ಮುಖ್ಯ ದೃಶ್ಯವಾದ 'ಗದಾಯುದ್ಧ'ದ ಚಿತ್ರೀಕರಣಕ್ಕೆ ಸಿನಿಮಾ ಟೀಂ ಸಜ್ಜಾಗಿದೆ. ಈ ಸೀನ್ ಗಳನ್ನ ಚಿತ್ರೀಕರಿಸುವುದಕ್ಕೆ ಸಾಕಷ್ಟು ತಯಾರಿ ಬೇಕಾಗಿದ್ದು, ಚಾಲೆಂಜಿಂಗ್ ಸ್ಟಾರ್ ಕೂಡ ಎಲ್ಲಾ ರೀತಿಯ ತಯಾರಿಯಲ್ಲಿ ಭಾಗಿಯಾಗಿದ್ದಾರೆ.ವಿಶೇಷ ಅಂದ್ರೆ ಚಿತ್ರೀಕರಣಕ್ಕೆ ಹಾಕಿದ್ದ ಶೆಡ್ಯೂಲ್ ಗಿಂತಲೂ ಮುಂಚೆಯೇ 'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗುತ್ತಿದೆ. '3ಡಿ' ಯಲ್ಲಿ ಚಿತ್ರೀಕರಿಸೋದಕ್ಕೆ ಪ್ಲಾನ್ ಆದ ನಂತ್ರ '300'ದಿನಗಳು ಚಿತ್ರೀಕರಣ ಮಾಡಬೇಕು ಅಂತ ಸಿನಿಮಾತಂಡ ಲೆಕ್ಕಾಚಾರ ಹಾಕಿತ್ತು. ಆದರೆ ನಿರ್ಮಾಪಕರು ಎರಡು ಕ್ಯಾಮೆರಾಗಳನ್ನಿಟ್ಟು ಒಟ್ಟೊಟ್ಟಿಗೆ ಶೂಟಿಂಗ್ ಪ್ರಾರಂಭ ಮಾಡಿದ್ರಿಂದ 150 ದಿನಗಳಲ್ಲಿ ಚಿತ್ರೀಕರಣ ಮುಗಿಸುತ್ತಿದ್ದಾರೆ.

Videos similaires